🌷 ಜ್ಞಾನಪೀಠ ಪ್ರಶಸ್ತಿ ಬಗ್ಗೆ


ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.

============

ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ 22, 1961 ರಲ್ಲಿ ಸ್ಥಾಪಿಸಿದರು. ಈ ಪ್ರಶಸ್ತಿಯನ್ನು ಪ್ರಪ್ರಥಮವಾಗಿ 1965ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ಪ್ರದಾನ ಮಾಡಲಾಯಿತು. ವಿಜೇತರಿಗೆ ಪ್ರಶಸ್ತಿ ಫಲಕ, 11 ಲಕ್ಷ ರೂಪಾಯಿ ಚೆಕ್ ಹಾಗೂ ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು.

=======

ಈ ಪ್ರಶಸ್ತಿಯನ್ನು ಸರಕಾರ ನೀಡುತ್ತದೆ ಎಂಬ ತಪ್ಪು ಕಲ್ಪನೆಯೂ ವ್ಯಾಪಕವಾಗಿದೆ. ವಾಸ್ತವದಲ್ಲಿ ಈ ಪ್ರಶಸ್ತಿಯನ್ನು ನೀಡುವವರು ಜ್ಞಾನಪೀಠ ಟ್ರಸ್ಟ್. ಟೈಂಸ್ ಆಫ್ ಇಂಡಿಯಾದ ಒಡೆತನವನ್ನು ಹೊಂದಿರುವ ಜೈನ್ ಕುಟುಂಬ ಜ್ಞಾನಪೀಠ ಟ್ರಸ್ಟ್ ನ ಸ್ಥಾಪಕರು. ಈಗಲೂ ಅದರ ಸದಸ್ಯರಲ್ಲಿ ಹೆಚ್ಚಿನವರು ಈ ಕುಟುಂಬಕ್ಕೆ ಸೇರಿದ್ದಾರೆ.

======

🌷 ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು

==================

> 1967 : ಕುವೆಂಪು – ಕನ್ನಡ – ಶ್ರೀ ರಾಮಾಯಣ ದರ್ಶನಂ

> 1973 : ದ. ರಾ. ಬೇಂದ್ರೆ – ಕನ್ನಡ – ನಾಕುತಂತಿ

> 1977 : ಕೆ. ಶಿವರಾಮ ಕಾರಂತ – ಕನ್ನಡ – ಮೂಕಜ್ಜಿಯ ಕನಸುಗಳು

> 1983 : ಮಾಸ್ತಿ ವೆಂಕಟೇಶ ಅಯ್ಯಂಗಾರ್ – ಕನ್ನಡ ಚಿಕ್ಕವೀರ ರಾಜೇಂದ್ರ

> 1990 : ವಿ. ಕೃ. ಗೋಕಾಕ – ಕನ್ನಡ – ಸಮಗ್ರ ಸಾಹಿತ್ಯ

> 1994 : ಯು. ಆರ್. ಅನಂತಮೂರ್ತಿ – ಕನ್ನಡ – ಸಮಗ್ರ ಸಾಹಿತ್ಯ

> 1998 : ಗಿರೀಶ್ ಕಾರ್ನಾಡ್ – ಕನ್ನಡ – ಸಮಗ್ರ ಸಾಹಿತ್ಯ

> 2010 : ಚಂದ್ರಶೇಖರ ಕಂಬಾರ – ಕನ್ನಡ – ಸಮಗ್ರ ಸಾಹಿತ್ಯ

=============

👉  ಜ್ಞಾನ ಪೀಠ ಪ್ರಶಸ್ತಿ ಪಡೆದ

ಮೊದಲಿಗ - 1965 : ಜಿ. ಶಂಕರ ಕುರುಪ್ – ಮಲಯಾಳಂ – ಓಡಕ್ತುಳ

No comments:

Post a Comment