ನಿಷ್ಠಾ-ಆನ್ಲೈನ್ ತರಬೇತಿ ಬಗ್ಗೆ ಮಾಹಿತಿ

 

*ಆತ್ಮೀಯ ಶಿಕ್ಷಕರೆ, ನಮಗೆಲ್ಲ ತಿಳಿದಿರುವಂತೆ, ನಿಷ್ಠಾ ಎಂಬ ಆನ್‌ಲೈನ್ ಕೋರ್ಸ್ ನವೆಂಬರ್ 03 ರಿಂದ ಆರಂಭವಾಗಲಿದ್ದು, ಅದಕ್ಕಾಗಿ ತಾವುಗಳು ಈಗಾಗಲೇ ಟೆಲಿಗ್ರಾಮ್ ಮತ್ತು ದೀಕ್ಷಾ App ನ್ನು ಡೌನ್‌ಲೋಡ್ ಮಾಡಿಕೊಂಡು ಸಿದ್ಧತೆಯಲ್ಲಿ ಇದ್ದೀರಿ ಎನ್ನುವುದು ನನ್ನ ಭಾವನೆ*. 

*ಈ ಮೂಲಕ ತಮ್ಮಲ್ಲಿ ಸ್ಪಷ್ಟ ಪಡಿಸುವುದೇನಂದರೆ, ಎಲ್ಲಾ ಶಿಕ್ಷಕರು ಮೊದಲು ತಿಳಿದುಕೊಳ್ಳಿ, ನಿಷ್ಠಾ ಇದೊಂದು ತರಬೇತಿ ಅಲ್ಲ.. ಇದು ಶಿಕ್ಷಕರ ಸ್ವಹ ಕಲಿಕೆಯ ಕೋರ್ಸ್ ಆಗಿದೆ. ಇಲ್ಲಿ ಯಾವುದೇ ಸಂಪನ್ಮೂಲ ವ್ಯಕ್ತಿ ನಿಮಗೆ ಯಾವುದೇ ವಿಷಯವನ್ನು ಬೋಧನೆ ಮಾಡುವುದಿಲ್ಲ. ಟೆಲಿಗ್ರಾಮ್ ಗ್ರೂಪ್ ಕೇವಲ ಮಾಹಿತಿಯನ್ನು ಹಂಚಿಕೊಳ್ಳಲು* *ಇದ್ದು, ದೀಕ್ಷಾ App ಮೂಲಕವೇ ನಿಮ್ಮ ಕೋರ್ಸ್ ಗಳನ್ನು ಆರಂಭಿಸಬೇಕಾಗುವುದು*.

*ನಿಷ್ಠಾ ಕೋರ್ಸ್ ನ ಮುಖ್ಯ ಅಂಶಗಳು* : -



 *1. ಇಲ್ಲಿ ಒಟ್ಟು 18 ಮಾಡ್ಯೂಲ್ ಗಳು ಇದ್ದು, ಪ್ರತಿ 3 ಮಾಡ್ಯೂಲ್ ಗಳನ್ನು 15 ದಿನಗಳಲ್ಲಿ ಓದಿ, ಅಲ್ಲಿ ಬರುವ ಚಟುವಟಿಕೆಗಳನ್ನು ಪೂರ್ಣಗೊಳಿಸಬೇಕು.*


*2. ಪ್ರತಿ ಸಾರಿ 1 ಮಾಡ್ಯೂಲ್ ನ್ನು ಪೂರ್ಣಗೊಳಿಸಿದ ನಂತರ ನಿಮಗೆ ಒಂದು ಪ್ರಮಾಣ ಪತ್ರ ದೊರೆಯುತ್ತದೆ. ಅದನ್ನು ಡೌನ್‌ಲೋಡ್ ಮಾಡಿಕೊಂಡು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. BRP /CRP ಅಥವಾ KRP ಗಳು ಕೇಳಿದಾಗ ಆ ಪ್ರಮಾಣ ಪತ್ರವನ್ನು ಟೆಲಿಗ್ರಾಮ್ ಗ್ರೂಪ್ ಮೂಲಕ ಹಂಚಿಕೊಳ್ಳಬೇಕು*.


*3. ದೀಕ್ಷಾ App ನಲ್ಲಿ ನೀವು ಲಾಗಿನ್ ಆದಾಗ ಗ್ರೀನ್ ಕಲರ್ ನಲ್ಲಿ ರೈಟ್ ಮಾರ್ಕ್ ಬಂದಿದ್ರೆ ಮಾತ್ರ ಲಾಗಿನ್ ಸರಿಯಾಗಿದೆ ಎಂದರ್ಥ.*


*4. ದೀಕ್ಷಾ ಪ್ರೊಫೈಲ್ ನಲ್ಲಿ ನಿಮ್ಮ ಹೆಸರಿನ ಮೊದಲ ಅಕ್ಷರದ ಮೇಲೆ ಗ್ರೀನ್ ರೈಟ್ ಸಿಗ್ನಲ್ ಮಾರ್ಕ್ ಬರದಿದ್ದಲ್ಲಿ ನೀವು ಕೋರ್ಸ್ ಮುಗಿಸಿದರು ನಿಮಗೆ ಪ್ರಮಾಣ ಪತ್ರ ದೊರೆಯುವುದಿಲ್ಲ.*


*5. ದೀಕ್ಷಾ ಲಾಗಿನ್ ಆಗುವಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಹಂತದಲ್ಲಿ ಬಗೆಹರಿಯದ ತಾಂತ್ರಿಕ ತೊಂದರೆಗಳಿದ್ದಲ್ಲಿ ನಿಮ್ಮ ಹೆಸರು, ಶಾಲೆ, KGID no, ಮೊಬೈಲ್ ಸಂಖ್ಯೆ, ಬರೆದು (nishtha. karnataka@gmail.com) ಈ ಇಮೇಲ್ ಗೆ ನಿಮ್ಮ ಸಮಸ್ಯೆಯನ್ನು ತಿಳಿಸಬಹುದು.*


*6. ನಿಮ್ಮ ದೀಕ್ಷಾ ಗೆ ಸಂಬಂಧಿಸಿದ ತಾಂತ್ರಿಕ ತೊಂದರೆಗಳನ್ನು BRP /CRP /KRP ಅಥವಾ ತಾಲ್ಲೂಕು/ ಜಿಲ್ಲಾ ಹಂತದ ಕಂಪ್ಯೂಟರ್ ಪ್ರೋಗ್ರಾಮರ್ ಗಳು ಕೂಡ ಬಗೆಹರಿಸದಿದ್ದಲ್ಲಿ ಮಾತ್ರ ನೀವು ರಾಜ್ಯ ಹಂತಕ್ಕೆ ನಿಮ್ಮ ಸಮಸ್ಯೆಗಳನ್ನು ತಿಳಿಸಬೇಕು. ಸಣ್ಣಪುಟ್ಟ ಸಮಸ್ಯೆಗಳನ್ನು ಇಮೇಲ್ ಮಾಡಬೇಡಿ.*



*7. ನಿಮ್ಮ ಫೋನ್ ನಲ್ಲಿ ದೀಕ್ಷಾ App ಲಾಗಿನ್ ಆಗದಿದ್ದರೆ,ಬೇರೆಯವರ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಸಹಾಯದಿಂದ ಲಾಗಿನ್ ಆಗಬಹುದು.*


*ಈ ಕೋರ್ಸ್ ಗೆ ಯಾರೆಲ್ಲ ಒಳಪಡುತ್ತಾರೆ.?*


 *ನಿಷ್ಠಾ ಕೋರ್ಸ್ ನ್ನು ಜಿಲ್ಲಾ ಹಂತದ ಡಯಟ್ ಹಂತದ ಎಲ್ಲಾ ಅಧಿಕಾರಿಗಳು, ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು(BEO ), ಕ್ಷೇತ್ರ ಸಮನ್ವಯಾಧಿಕಾರಿಗಳು(BRC Coordinator),BRP, CRP, ECO,KRP ಗಳು ಹಾಗೂ ಎಲ್ಲಾ ಶಿಕ್ಷಕರು ಕೂಡ ಕಡ್ಡಾಯವಾಗಿ ದೀಕ್ಷಾ App ನ್ನು ಡೌನ್‌ಲೋಡ್ ಮಾಡಿಕೊಂಡು ಲಾಗಿನ್ ಆಗಲೇಬೇಕು*. *18 ಕೋರ್ಸ್ ಗಳನ್ನು ಓದಿ ಮುಗಿಸಲೇಬೇಕು*.

*Maternity ರಜೆಯನ್ನು ಪಡೆದಿರುವವರು, ಕರೋನಾ ಡ್ಯೂಟಿ ಮಾಡುತ್ತಿರುವ ಶಿಕ್ಷಕರು ಕೂಡ ಈ ಕೋರ್ಸ್ ಗೆ ಸೇರಲೇಬೇಕು.*


*ಒಟ್ಟಾರೆ ನಿಷ್ಠಾ ಕೋರ್ಸ್ ನಿಂದ ಯಾರಿಗೂ ವಿನಾಯಿತಿ ಇಲ್ಲ*..

*ಇದು NCERT ಮತ್ತು DSERT ಯ ಕನಸಿನ ಕೂಸು ಆಗಿದ್ದು, ಪ್ರತಿಯೊಬ್ಬರು* *ಯಾವುದೇ ಕಾರಣಕ್ಕೂ ಈ ಕೋರ್ಸ್ ನಿಂದ ಹೊರಗುಳಿಯುವಂತಿಲ್ಲ.

No comments:

Post a Comment