ಕನಸಿನ ಯೋಜನೆ: ದೇಶದ ಮೊಟ್ಟ ಮೊದಲ ಸೀಪ್ಲೇನ್‍ಗೆ ಪ್ರಧಾನಿ ಮೋದಿ ಚಾಲನೆ

 ದೇಶದ ಮೊಟ್ಟ ಮೊದಲ ಸೀಪ್ಲೇನ್‍ ಅಥವಾ ಸಮುದ್ರದ ವಿಮಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು. ಎರಡು ದಿನಗಳ ಗುಜರಾತ್‌ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 145ನೇ ಜನ್ಮದಿನಾಚರಣೆ ಅಂಗವಾಗಿ ದೇಶದ ಈ ವಿನೂತನ ಯೋಜನೆ ಉದ್ಘಾಟಿಸಿ ಚಾಲನೆ ಕೊಟ್ಟರು. ಕೆವಾಡಿಯಾದ ನರ್ಮದಾ ಸರೋವರದ ತಟದಲ್ಲಿ ಪ್ರಧಾನಿ ಮೋದಿ ತಮ್ಮ ಕನಸಿನ ಯೋಜನೆಯನ್ನು ದೇಶದ ಜನರಿಗೆ ಅರ್ಪಿಸಿದರು

ಕೇಂದ್ರ ಸರಕಾರದ ಉಡಾನ್ ಯೋಜನೆಯಡಿ ಇದನ್ನು ಆರಂಭಿಸಲಾಗಿದ್ದು, ಗುಜರಾತ್ ಸರ್ಕಾರದೊಂದಿಗೆ ಕೇಂದ್ರ ನಾಗರಿಕ ವಿಮಾನಯಾನ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರದೊಂದಿಗೆ ತ್ರಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಲ್ಲದೇ ಪ್ರಧಾನಿ ಮೋದಿಯವರ ಮೇಕ್‌ ಇನ್‌ ಇಂಡಿಯಾದ ಕನಸಿನ ಯೋಜನೆ ಕೂಡ ಹೌದು. ಇನ್ನು ಸಬರಮತಿ ಬಳಿಕ ಗುವಾಹಟಿ, ಅಂಡಮಾನ್ ನಿಕೋಬಾರ್, ಯಮುನಾ ಸೇರಿದಂತೆ ಉತ್ತರಾಖಂಡದ ಟಪ್ಪರ್ ಅಣೆಕಟ್ಟಿನ ವಿವಿಧ ಮಾರ್ಗಗಳಲ್ಲಿ ನಿಯಮಿತ ಸೇವೆಗಳನ್ನು ನೀಡಲು ಯೋಜನೆ ರೂಪಿಸಲಾಗಿದೆ. ದ್ವೀಪಗಳಲ್ಲಿ ಇದರ ಅಗತ್ಯತೆ ಬಹಳಷ್ಟಿದೆ. ದೇಶದಲ್ಲಿ ಸ್ಪೈಸ್ ಜೆಟ್ ಸಂಸ್ಥೆ ಗುಜರಾತ್‌ನ ಸೀಪ್ಲೇನ್‌ ನ ಸೇವೆಯನ್ನು ನೀಡಲಿದೆ.

No comments:

Post a Comment