ಲಾಗಿನ್ ಆಗುವಲ್ಲಿ ಸಮಸ್ಯೆ ಎದುರಿಸುತ್ತಿರುವ ಶಿಕ್ಷಕರ ಗಮನಕ್ಕೆ...

 

DSERT ಯಿಂದ ಬಂದಿರುವ ಮೆಸೇಜ್ ಗಳು ಕೆಲಸ ಮಾಡಲು ಪ್ರಾರಂಭಿಸಿವೆ...


ಅವುಗಳನ್ನು ಬಳಸಿ ತುಂಬಾ ಸುಲಭವಾಗಿ ಲಾಗಿನ್ ಆಗಬಹುದು..

⬇️

DSERT ಯಿಂದ ಬಂದಿರುವ ಮೆಸೇಜ್ ನಲ್ಲಿರುವ user ID  ಮತ್ತು password ಅನ್ನು ಒಂದು ಹಾಳೆಯಲ್ಲಿ ಬರೆದುಕೊಳ್ಳಿ

⬇️

ದೀಕ್ಷಾ ಆಪ್ ಓಪನ್ ಮಾಡಿ , ಲಾಗಿನ್ ಕ್ಲಿಕ್ ಮಾಡಿ.

⬇️


Login with state system ಕ್ಲಿಕ್ , ಮಾಡಿ state karnataka ಆಯ್ಕೆ ಮಾಡಿ, submit ಕೊಡಿ.

⬇️

KGID number ಎಂದು ಇರುವ ಜಾಗದಲ್ಲಿ DSERT ಮೆಸೇಜ್ ನಲ್ಲಿರುವ user ID ಯನ್ನು ಟೈಪ್ ಮಾಡಿ.

⬇️

Password ಜಾಗದಲ್ಲಿ ಮೆಸೇಜ್ ನಲ್ಲಿರುವ password ಟೈಪ್ ಮಾಡಿ, ಲಾಗಿನ್ ಕೊಡಿ.

⬇️

ಪುಸ್ತಕದ ಪುಟಗಳು ತರೆದುಕೊಳ್ಳುತ್ತವೆ.

⬇️

ಯಶಸ್ವಿಯಾದ ಪ್ರೊಫೈಲ್ ಫೋಟೋ screen shot ತೆಗೆದು, ನಿಮಗೆ ಸಂಬಂಧಿಸಿದ KRPಗಳ ಟೆಲಿಗ್ರಾಮ್ ಗ್ರೂಪಿಗೆ ಹಾಕಿ..

 😊😊😊

03-11-2020 ಶೈಕ್ಷಣಿಕ, ಉದ್ಯೋಗ, ಕ್ರೀಡೆ ಮತ್ತು ಇತರೆ ಸುದ್ಧಿಗಳು


 👆🏿ಶಿಕ್ಷಕರ ವರ್ಗಾವಣೆಗೆ ಇಂದಿನಿಂದ ವಿಭಾಗವಾರು ಅಧಿಕಾರಿಗಳೊಂದಿಗೆ ಸಭೆ-ಶಿಕ್ಷಣ ಇಲಾಖೆ*

👆🏿ಶಾಲೆ ಆರಂಭ ವಾರದಲ್ಲಿ ನಿರ್ಧಾರ;ನಾಳೆಯಿಂದ ಅಧಿಕಾರಿಗಳು, ಶಿಕ್ಷಣ ತಜ್ಜರ ಜೊತೆ 3 ದಿನ ಸಭೆ

👆🏿ಕ್ಯಾಷ್ ವಹಿವಾಟುಗಳಿಗೆ ಬ್ಯಾಂಕುಗಳಿಂದ ಸುಲಿಗೆ!

👆🏿ಸರಕಾರಿ ನೌಕರರ ರಜೆಯ ಮಿತಿಯ ಮೇಲೆ ನಿರ್ಬಂಧ

👆🏿ಪೋಲಿಸ್ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿ

👆🏿ಸರಕಾರಿ ನೌಕರರಿಗೆ ನಡತೆ ಚೌಕಟ್ಟು ಪ್ರಕಟ

👆🏿ಸರಕಾರಿ ನೌಕರರಿಗೆ ಕೇಂದ್ರದಿಂದ ಬಂಪರ್ ಕೊಡುಗೆ

👆🏿ಆಸ್ಸಾಂ, ಆಂಧ್ರ, ಉತ್ತರಾಖಂಡ ರಾಜ್ಯಗಳಲ್ಲಿ ಶಾಲೆ ಪುನರಾರಂಭ*

👆🏿ಮತದಾನದ ನಂತರ ಕೋವಿಡ್ Random ಪರೀಕ್ಷೆ

👆🏿ವಿದ್ಯಾರ್ಥಿನಿಗೆ ಮನೆ ಕಟ್ಟಿಕೊಟ್ಟ ಶಿಕ್ಷಕನಿಗೆ ಸಚಿವರ ಅಭಿನಂದನೆ

👆🏿Online ನಲ್ಲಿ ಮೊದಲ ದಿನ ಒಂದೂ ಆಸ್ತಿ ನೋಂದಣಿ ಇಲ್ಲ

*👆🏿YouTube ನಲ್ಲಿ ಬೇಬಿ ಶಾರ್ಕ ಗೀತೆ 700 ಕೋಟಿ ಜನರಿಂದ ವೀಕ್ಷಣೆ*

*👆🏿493 ಆಶ್ರಮ ಶಾಲಾ ಶಿಕ್ಷಕರ ನೇಮಕಾತಿ ರದ್ದುಗೊಳಿಸಿದ KPSC*

*👆🏿ಬಿಎಂಟಿಸಿ ಬಸ್ ನಲ್ಲಿ ಮಾಸ್ಕ್ ಕಡ್ಡಾಯ*

*👆🏿ಕಾರಿನಲ್ಲಿ ಒಬ್ಬರೇ ಇದ್ದರೆ ಮಾಸ್ಕ್ ಬೇಡ*

*👆🏿ಮದುವೆಯ ದೊಡ್ಡ ಹಾಲನಲ್ಲಿ 200 ಜನಕ್ಕೆ ಅನುಮತಿ*

*👆🏿ಕರೋನಾ ಸೊಂಕು ಶೇ.5 ರಷ್ಟು ಇಳಿಕೆ*

*👆🏿ಡಿ.1 ರಂದು ರಾಜ್ಯಸಭಾ ಉಪಚುನಾವಣೆ*

*👆🏿ದೀಪಾವಳಿ ಕತ್ತಲಿನ ಭೀತಿ*

*👆🏿ಭೀಮಾ ತೀರದಲ್ಲಿ ಮತ್ತೆ ರಕ್ತದೋಕುಳಿ*

*👆🏿ಕಾಯಕ ವರ್ಷಕ್ಕೆ 32 ವರ್ಷ ಸೂತ್ರ*

*👆🏿ಇಂದು ಉಪಸಮರ,ಭವಿಷ್ಯದ ದಿಕ್ಸೂಚಿ*

*👆🏿ಯಾರಿಗೆ ಟ್ರಂಪ್ ಕಾರ್ಡ್,ಕುತೂಹಲ ಘಟ್ಟಕ್ಕೆ ಅಮೇರಿಕಾ ಚುನಾವಣೆ*

*👆🏿ಕರೋನ ಸಕ್ರಿಯ ಪ್ರಮಾಣ ಭಾರಿ ಇಳಿಕೆ*

*🌹ರಾಜ್ಯಕ್ಕೆ GST ಬಿಡುಗಡೆ*

*👆🏿ಮಾನಸಿಕ ಖಿನ್ನತೆಯಿಂದ ಮಕ್ಕಳನ್ನು ಕಾಪಾಡಿ*

*👆🏿ಅಂಬೇಡ್ಕರ್ ಭಾಷಣ ಮರು ಮುದ್ರಣ*

*👆🏿ದೇಶದ ಸೇವೆಯಲ್ಲಿ ಸೇನಾ ವಾಯುಯಾನ*

*👆🏿ಹೈದರಾಬಾದ್ ಸನ್ ಗೆ ಗೆಲುವು ಅನಿವಾರ್ಯ*

*👆🏿ಗೆದ್ದ ಡೆಲ್ಲಿ, ಸೋತ ಆರಸಿಬಿ ಪ್ಲೇ ಆಫ್ ಗೆ ಎಂಟ್ರಿ

ದೀಕ್ಷಾ ಆ್ಯಪ್ ಐಡಿ ಯಲ್ಲಿ ಗ್ರೀನ್ ರೈಟ್ ಬಾರದೆ ಇದ್ದವರು ಹೇಗೆ ಮಾಡಿ.


*1)ದೀಕ್ಷಾ ಆ್ಯಪ್" uninstall"* *maadi.ಪುನಃ install maadi.

*2)ಎಲ್ಲ ವಿವರಗಳನ್ನು ಫಿಲ್ ಮಾಡಿ*

*3)ಲಾಗಿನ್ ಪುಟ ತೆರೆದಾಗ forget* password ಸೆಲೆಕ್ಟ್ ಮಾಡಿ*

*4) ಮೊಬೈಲ್ ನಂಬರ್  entry ಮಾಡಿ*

*5)ಹೆಸರಿನ ಜಾಗದಲ್ಲಿ  shikshaka Mitra appನಲ್ಲಿ ದ್ದಂತೆ ಕನ್ನಡದಲ್ಲಿ ಟೈಪ್ ಮಾಡಿ*

*6)OTP ಪಡೆಯಿರಿ*

*7)ನ್ಯೂ ಪಾಸ್ವರ್ಡ್ ನಮೂದಿಸಿ*

*8)back to login page*

*9)mobile number and new* *password entry  ಮಾಡಿ*

*10) ಮೇಲೆ ಕಾಣುವ ನಿಮ್ಮ ಹೆಸರಿನ ಮೊದಲ ಅಕ್ಷರ ( on the*top of page) ಕಾಣುತ್ತೆ. Click maadi*

*11)Again login maadi.*

*ನಂತರ ನಿಮ್ಮ ದೀಕ್ಷಾ ಐಡಿ ಯಲ್ಲಿ ಗ್ರೀನ್ ರೈಟ್ ಬರುತ್ತೆ.*

🎤🎤🎤🎤🎤🎤🎤🎤🎤🎤🎤🎤

ನಿಷ್ಠ ಕೋರ್ಸ್ನ ವೇಳಾಪಟ್ಟಿ


 

ನಿಷ್ಠಾ-ಆನ್ಲೈನ್ ತರಬೇತಿ ಬಗ್ಗೆ ಮಾಹಿತಿ

 

*ಆತ್ಮೀಯ ಶಿಕ್ಷಕರೆ, ನಮಗೆಲ್ಲ ತಿಳಿದಿರುವಂತೆ, ನಿಷ್ಠಾ ಎಂಬ ಆನ್‌ಲೈನ್ ಕೋರ್ಸ್ ನವೆಂಬರ್ 03 ರಿಂದ ಆರಂಭವಾಗಲಿದ್ದು, ಅದಕ್ಕಾಗಿ ತಾವುಗಳು ಈಗಾಗಲೇ ಟೆಲಿಗ್ರಾಮ್ ಮತ್ತು ದೀಕ್ಷಾ App ನ್ನು ಡೌನ್‌ಲೋಡ್ ಮಾಡಿಕೊಂಡು ಸಿದ್ಧತೆಯಲ್ಲಿ ಇದ್ದೀರಿ ಎನ್ನುವುದು ನನ್ನ ಭಾವನೆ*. 

*ಈ ಮೂಲಕ ತಮ್ಮಲ್ಲಿ ಸ್ಪಷ್ಟ ಪಡಿಸುವುದೇನಂದರೆ, ಎಲ್ಲಾ ಶಿಕ್ಷಕರು ಮೊದಲು ತಿಳಿದುಕೊಳ್ಳಿ, ನಿಷ್ಠಾ ಇದೊಂದು ತರಬೇತಿ ಅಲ್ಲ.. ಇದು ಶಿಕ್ಷಕರ ಸ್ವಹ ಕಲಿಕೆಯ ಕೋರ್ಸ್ ಆಗಿದೆ. ಇಲ್ಲಿ ಯಾವುದೇ ಸಂಪನ್ಮೂಲ ವ್ಯಕ್ತಿ ನಿಮಗೆ ಯಾವುದೇ ವಿಷಯವನ್ನು ಬೋಧನೆ ಮಾಡುವುದಿಲ್ಲ. ಟೆಲಿಗ್ರಾಮ್ ಗ್ರೂಪ್ ಕೇವಲ ಮಾಹಿತಿಯನ್ನು ಹಂಚಿಕೊಳ್ಳಲು* *ಇದ್ದು, ದೀಕ್ಷಾ App ಮೂಲಕವೇ ನಿಮ್ಮ ಕೋರ್ಸ್ ಗಳನ್ನು ಆರಂಭಿಸಬೇಕಾಗುವುದು*.

*ನಿಷ್ಠಾ ಕೋರ್ಸ್ ನ ಮುಖ್ಯ ಅಂಶಗಳು* : -



 *1. ಇಲ್ಲಿ ಒಟ್ಟು 18 ಮಾಡ್ಯೂಲ್ ಗಳು ಇದ್ದು, ಪ್ರತಿ 3 ಮಾಡ್ಯೂಲ್ ಗಳನ್ನು 15 ದಿನಗಳಲ್ಲಿ ಓದಿ, ಅಲ್ಲಿ ಬರುವ ಚಟುವಟಿಕೆಗಳನ್ನು ಪೂರ್ಣಗೊಳಿಸಬೇಕು.*


*2. ಪ್ರತಿ ಸಾರಿ 1 ಮಾಡ್ಯೂಲ್ ನ್ನು ಪೂರ್ಣಗೊಳಿಸಿದ ನಂತರ ನಿಮಗೆ ಒಂದು ಪ್ರಮಾಣ ಪತ್ರ ದೊರೆಯುತ್ತದೆ. ಅದನ್ನು ಡೌನ್‌ಲೋಡ್ ಮಾಡಿಕೊಂಡು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. BRP /CRP ಅಥವಾ KRP ಗಳು ಕೇಳಿದಾಗ ಆ ಪ್ರಮಾಣ ಪತ್ರವನ್ನು ಟೆಲಿಗ್ರಾಮ್ ಗ್ರೂಪ್ ಮೂಲಕ ಹಂಚಿಕೊಳ್ಳಬೇಕು*.


*3. ದೀಕ್ಷಾ App ನಲ್ಲಿ ನೀವು ಲಾಗಿನ್ ಆದಾಗ ಗ್ರೀನ್ ಕಲರ್ ನಲ್ಲಿ ರೈಟ್ ಮಾರ್ಕ್ ಬಂದಿದ್ರೆ ಮಾತ್ರ ಲಾಗಿನ್ ಸರಿಯಾಗಿದೆ ಎಂದರ್ಥ.*


*4. ದೀಕ್ಷಾ ಪ್ರೊಫೈಲ್ ನಲ್ಲಿ ನಿಮ್ಮ ಹೆಸರಿನ ಮೊದಲ ಅಕ್ಷರದ ಮೇಲೆ ಗ್ರೀನ್ ರೈಟ್ ಸಿಗ್ನಲ್ ಮಾರ್ಕ್ ಬರದಿದ್ದಲ್ಲಿ ನೀವು ಕೋರ್ಸ್ ಮುಗಿಸಿದರು ನಿಮಗೆ ಪ್ರಮಾಣ ಪತ್ರ ದೊರೆಯುವುದಿಲ್ಲ.*


*5. ದೀಕ್ಷಾ ಲಾಗಿನ್ ಆಗುವಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಹಂತದಲ್ಲಿ ಬಗೆಹರಿಯದ ತಾಂತ್ರಿಕ ತೊಂದರೆಗಳಿದ್ದಲ್ಲಿ ನಿಮ್ಮ ಹೆಸರು, ಶಾಲೆ, KGID no, ಮೊಬೈಲ್ ಸಂಖ್ಯೆ, ಬರೆದು (nishtha. karnataka@gmail.com) ಈ ಇಮೇಲ್ ಗೆ ನಿಮ್ಮ ಸಮಸ್ಯೆಯನ್ನು ತಿಳಿಸಬಹುದು.*


*6. ನಿಮ್ಮ ದೀಕ್ಷಾ ಗೆ ಸಂಬಂಧಿಸಿದ ತಾಂತ್ರಿಕ ತೊಂದರೆಗಳನ್ನು BRP /CRP /KRP ಅಥವಾ ತಾಲ್ಲೂಕು/ ಜಿಲ್ಲಾ ಹಂತದ ಕಂಪ್ಯೂಟರ್ ಪ್ರೋಗ್ರಾಮರ್ ಗಳು ಕೂಡ ಬಗೆಹರಿಸದಿದ್ದಲ್ಲಿ ಮಾತ್ರ ನೀವು ರಾಜ್ಯ ಹಂತಕ್ಕೆ ನಿಮ್ಮ ಸಮಸ್ಯೆಗಳನ್ನು ತಿಳಿಸಬೇಕು. ಸಣ್ಣಪುಟ್ಟ ಸಮಸ್ಯೆಗಳನ್ನು ಇಮೇಲ್ ಮಾಡಬೇಡಿ.*



*7. ನಿಮ್ಮ ಫೋನ್ ನಲ್ಲಿ ದೀಕ್ಷಾ App ಲಾಗಿನ್ ಆಗದಿದ್ದರೆ,ಬೇರೆಯವರ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಸಹಾಯದಿಂದ ಲಾಗಿನ್ ಆಗಬಹುದು.*


*ಈ ಕೋರ್ಸ್ ಗೆ ಯಾರೆಲ್ಲ ಒಳಪಡುತ್ತಾರೆ.?*


 *ನಿಷ್ಠಾ ಕೋರ್ಸ್ ನ್ನು ಜಿಲ್ಲಾ ಹಂತದ ಡಯಟ್ ಹಂತದ ಎಲ್ಲಾ ಅಧಿಕಾರಿಗಳು, ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು(BEO ), ಕ್ಷೇತ್ರ ಸಮನ್ವಯಾಧಿಕಾರಿಗಳು(BRC Coordinator),BRP, CRP, ECO,KRP ಗಳು ಹಾಗೂ ಎಲ್ಲಾ ಶಿಕ್ಷಕರು ಕೂಡ ಕಡ್ಡಾಯವಾಗಿ ದೀಕ್ಷಾ App ನ್ನು ಡೌನ್‌ಲೋಡ್ ಮಾಡಿಕೊಂಡು ಲಾಗಿನ್ ಆಗಲೇಬೇಕು*. *18 ಕೋರ್ಸ್ ಗಳನ್ನು ಓದಿ ಮುಗಿಸಲೇಬೇಕು*.

*Maternity ರಜೆಯನ್ನು ಪಡೆದಿರುವವರು, ಕರೋನಾ ಡ್ಯೂಟಿ ಮಾಡುತ್ತಿರುವ ಶಿಕ್ಷಕರು ಕೂಡ ಈ ಕೋರ್ಸ್ ಗೆ ಸೇರಲೇಬೇಕು.*


*ಒಟ್ಟಾರೆ ನಿಷ್ಠಾ ಕೋರ್ಸ್ ನಿಂದ ಯಾರಿಗೂ ವಿನಾಯಿತಿ ಇಲ್ಲ*..

*ಇದು NCERT ಮತ್ತು DSERT ಯ ಕನಸಿನ ಕೂಸು ಆಗಿದ್ದು, ಪ್ರತಿಯೊಬ್ಬರು* *ಯಾವುದೇ ಕಾರಣಕ್ಕೂ ಈ ಕೋರ್ಸ್ ನಿಂದ ಹೊರಗುಳಿಯುವಂತಿಲ್ಲ.

ವೆಕ್ಸಾಸ್ ಸಿಂಡ್ರೋಮ್

 

👉ವೆಕ್ಸಾಸ್ ಸಿಂಡ್ರೋಮ್ : 


ವಿಜ್ಞಾನಿಗಳು ಪುರುಷರಲ್ಲಿ ಈ ಅಪರೂಪದ ಮತ್ತು ಮಾರಕ ಆನುವಂಶಿಕ ರೋಗವನ್ನು ಕಂಡುಕೊಳ್ಳುತ್ತಾರೆ.


👉VEXAS ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ಕಾರ್ಟಿಲೆಜ್ನ ಉರಿಯೂತ, ಶ್ವಾಸಕೋಶದ ವ್ಯವಸ್ಥೆಯಲ್ಲಿನ ಅಸಹಜತೆಗಳು, ಮರುಕಳಿಸುವ ಜ್ವರ ಮತ್ತು ಶ್ವಾಸಕೋಶದ ವೈಪರೀತ್ಯಗಳನ್ನು ಒಳಗೊಂಡಿರುವ ಲಕ್ಷಣಗಳಿಗೆ ಕಾರಣವಾಗುತ್ತದೆ.


👉ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (ಎನ್‌ಐಹೆಚ್) ನ ವಿಜ್ಞಾನಿಗಳು ಯುಬಿಎ 1 ಜೀನ್‌ನಲ್ಲಿನ ರೂಪಾಂತರದಿಂದ ಉಂಟಾಗುವ ವ್ಯಾಕ್ಯೂಲ್, ಇ 1 ಕಿಣ್ವ, ಎಕ್ಸ್-ಲಿಂಕ್ಡ್, ಆಟೋಇನ್‌ಫ್ಲಾಮೇಟರಿ ಮತ್ತು ಸೊಮ್ಯಾಟಿಕ್ ಸಿಂಡ್ರೋಮ್ (ವಿಎಕ್ಸ್‌ಎಎಸ್) ಸಿಂಡ್ರೋಮ್ ಎಂಬ ಪುರುಷರ ಮೇಲೆ ಪರಿಣಾಮ ಬೀರುವ ಅಪರೂಪದ ಮತ್ತು ಮಾರಕ ಆನುವಂಶಿಕ ಕಾಯಿಲೆಯನ್ನು ಕಂಡುಹಿಡಿದಿದ್ದಾರೆ.


👉ಪುರುಷರಲ್ಲಿ ವೆಕ್ಸಾಸ್ ಕಂಡುಬಂದಿದೆ ಎಂದು ಸಂಶೋಧಕರು ಶಂಕಿಸಿದ್ದಾರೆ ಏಕೆಂದರೆ ಇದು ಎಕ್ಸ್ ಕ್ರೋಮೋಸೋಮ್‌ಗೆ ಸಂಬಂಧಿಸಿದೆ, ಇದರಲ್ಲಿ ಪುರುಷರು ಮಾತ್ರ ಇರುತ್ತಾರೆ. ಮತ್ತೊಂದೆಡೆ, ಮಹಿಳೆಯರ ಹೆಚ್ಚುವರಿ ಎಕ್ಸ್ ಕ್ರೋಮೋಸೋಮ್ ಈ ಸಂದರ್ಭದಲ್ಲಿ ರಕ್ಷಣಾತ್ಮಕ ಅಂಶವಾಗಿರಬಹುದು ಎಂದು ಅವರು ಉಹಿಸುತ್ತಾರೆ.

🌷 ಜ್ಞಾನಪೀಠ ಪ್ರಶಸ್ತಿ ಬಗ್ಗೆ


ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.

============

ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ 22, 1961 ರಲ್ಲಿ ಸ್ಥಾಪಿಸಿದರು. ಈ ಪ್ರಶಸ್ತಿಯನ್ನು ಪ್ರಪ್ರಥಮವಾಗಿ 1965ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ಪ್ರದಾನ ಮಾಡಲಾಯಿತು. ವಿಜೇತರಿಗೆ ಪ್ರಶಸ್ತಿ ಫಲಕ, 11 ಲಕ್ಷ ರೂಪಾಯಿ ಚೆಕ್ ಹಾಗೂ ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು.

=======

ಈ ಪ್ರಶಸ್ತಿಯನ್ನು ಸರಕಾರ ನೀಡುತ್ತದೆ ಎಂಬ ತಪ್ಪು ಕಲ್ಪನೆಯೂ ವ್ಯಾಪಕವಾಗಿದೆ. ವಾಸ್ತವದಲ್ಲಿ ಈ ಪ್ರಶಸ್ತಿಯನ್ನು ನೀಡುವವರು ಜ್ಞಾನಪೀಠ ಟ್ರಸ್ಟ್. ಟೈಂಸ್ ಆಫ್ ಇಂಡಿಯಾದ ಒಡೆತನವನ್ನು ಹೊಂದಿರುವ ಜೈನ್ ಕುಟುಂಬ ಜ್ಞಾನಪೀಠ ಟ್ರಸ್ಟ್ ನ ಸ್ಥಾಪಕರು. ಈಗಲೂ ಅದರ ಸದಸ್ಯರಲ್ಲಿ ಹೆಚ್ಚಿನವರು ಈ ಕುಟುಂಬಕ್ಕೆ ಸೇರಿದ್ದಾರೆ.

======

🌷 ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು

==================

> 1967 : ಕುವೆಂಪು – ಕನ್ನಡ – ಶ್ರೀ ರಾಮಾಯಣ ದರ್ಶನಂ

> 1973 : ದ. ರಾ. ಬೇಂದ್ರೆ – ಕನ್ನಡ – ನಾಕುತಂತಿ

> 1977 : ಕೆ. ಶಿವರಾಮ ಕಾರಂತ – ಕನ್ನಡ – ಮೂಕಜ್ಜಿಯ ಕನಸುಗಳು

> 1983 : ಮಾಸ್ತಿ ವೆಂಕಟೇಶ ಅಯ್ಯಂಗಾರ್ – ಕನ್ನಡ ಚಿಕ್ಕವೀರ ರಾಜೇಂದ್ರ

> 1990 : ವಿ. ಕೃ. ಗೋಕಾಕ – ಕನ್ನಡ – ಸಮಗ್ರ ಸಾಹಿತ್ಯ

> 1994 : ಯು. ಆರ್. ಅನಂತಮೂರ್ತಿ – ಕನ್ನಡ – ಸಮಗ್ರ ಸಾಹಿತ್ಯ

> 1998 : ಗಿರೀಶ್ ಕಾರ್ನಾಡ್ – ಕನ್ನಡ – ಸಮಗ್ರ ಸಾಹಿತ್ಯ

> 2010 : ಚಂದ್ರಶೇಖರ ಕಂಬಾರ – ಕನ್ನಡ – ಸಮಗ್ರ ಸಾಹಿತ್ಯ

=============

👉  ಜ್ಞಾನ ಪೀಠ ಪ್ರಶಸ್ತಿ ಪಡೆದ

ಮೊದಲಿಗ - 1965 : ಜಿ. ಶಂಕರ ಕುರುಪ್ – ಮಲಯಾಳಂ – ಓಡಕ್ತುಳ

ಓದಿದ್ದು ಮರೆತು ಹೋಗುವುದು ಏಕೆ ಗೊತ್ತೇ?



ಕೆಲವರು ಎಷ್ಟೇ ಓದಿದರೂ, ಓದಿದೆಲ್ಲಾ ಮರೆತು ಹೋಗುತ್ತದೆ. ಹೇಗೆ ಓದಬೇಕು ಅಂತಾನೆ ಗೊತ್ತಾಗುತ್ತಿಲ್ಲ ಎನ್ನುತ್ತಾರೆ. ಅಂತವರಿಗಾಗಿ ಇಲ್ಲಿ ಕೆಲವು ಟಿಪ್ಸ್ ಗಳನ್ನು  ನೀಡಲಾಗಿದೆ.


   

ಪರೀಕ್ಷಾ ದೃಷ್ಟಿಯಿಂದ ಓದಿದ ವಿಷಯ ಎಲ್ಲವನ್ನು ನೆನಪಿನಲ್ಲಿ ಇಟ್ಟುಕೊಳ್ಳಲೇಬೇಕು. ಆದರೆ ಮರೆವು ಬಹುಸಂಖ್ಯಾತರ ಸಮಸ್ಯೆ. ಇಂದಿನ ಲೇಖನದಲ್ಲಿ ಓದಿದ, ಅಭ್ಯಾಸ ಮಾಡಿದ ವಿಷಯಗಳು ಏಕೆ ಮರೆತು ಹೋಗುತ್ತವೆ?, ಕಾರಣಗಳು ಯಾವುವು?, ಅದಕ್ಕೆ ಪರಿಹಾರವೇನು? ಎಂಬುದನ್ನು ಇಲ್ಲಿ ತಿಳಿಸಿದ್ದೇವೆ.



ಮರೆಯಲು ಕಾರಣಗಳು ನೂರಾರು ಇರುತ್ತವೆ. ಆದರೆ ಮರೆವಿಗೆ ಸಾಮಾನ್ಯವಾದ ಕಾರಣಗಳು ಯಾವುವು ಎಂದು ತಿಳಿದರೆ, ವಿದ್ಯಾರ್ಥಿಗಳಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವ ಅಭ್ಯರ್ಥಿಗಳಿಗೆ ಸಹಕಾರಿಯಾಗುತ್ತದೆ.



♣️ ​ಕಂಠಪಾಠ:


ಕಂಠಪಾಠ ಮಾಡುವ ಹವ್ಯಾಸವು ಕೇವಲ ಪದ್ಯಗಳ ಕಂಠಪಾಠಕ್ಕೆ ಮಾತ್ರ ಸೀಮಿತವಾಗಿರಲಿ. ಪರೀಕ್ಷೆಗಳಿಗೂ ಸಹ ಈ ಅಭ್ಯಾಸ ಮುಂದುವರೆಸುವುದು ಸೂಕ್ತವಲ್ಲ. ಅದರ ಬದಲಾಗಿ ಓದುವ ವಿಷಯವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಓದುವುದನ್ನು ಮೈಗೂಡಿಸಿಕೊಳ್ಳಬೇಕು.



♣️​ ಓದುವಾಗ ಕೆಟ್ಟ ಅನುಭವಗಳು, ಅಲೋಚನೆಗಳು ಮನಸ್ಸಿಗೆ ಬರುವುದು:


ಜೀವನದಲ್ಲಿ ಸಮಸ್ಯೆಗಳು ಇದ್ದದ್ದೆ.

ಹಾಗಂತ ಹಿಂದಿನ ಅಥವಾ ಮುಂದಿನ ಘಟನೆಗಳನ್ನು ಓದಿನ ನಡುವೆ ನೆನಪಿಸಿಕೊಂಡರೆ ಓದಿಗೆ ಅಡ್ಡಿಯಾಗುತ್ತದೆ. ಯಾವುದೇ ಅಂಶಗಳು ತಲೆಯೊಳಗೆ ಹೋಗುವುದಿಲ್ಲ. ಯಾವಾಗಲೋ ನಡೆದ ಕೆಟ್ಟ ಘಟನೆಗಳನ್ನು ನೆನೆದುಕೊಂಡು ಇಂದಿನ ಸಂತೋಷವನ್ನು ಮತ್ತು ಮಹತ್ವದ ಕ್ಷಣಗಳನ್ನು ಹಾಳುಮಾಡಿಕೊಳ್ಳಬಾರದು.



✍🏻 ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಾಡಲೇಬಾರದ ತಪ್ಪುಗಳು ಇವು: ✍🏻


♣️​ ಹೆದರುವುದು:


ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದರೆ, ಫೇಲ್‌ ಆದರೆ ಅವಮಾನ ಆಗುತ್ತದೆ. ಪೋಷಕರು ಬೈಯುತ್ತಾರೆ, ಕ್ಷಮಿಸುವುದಿಲ್ಲ, ನಾನು ಬಡವನಾಗೆ ಇರಬೇಕಾಗುತ್ತದೆ ಎಂಬೆಲ್ಲ ದುರಾಲೋಚನೆಗಳಲ್ಲಿ ಮುಳುಗಿ ಓದುತ್ತಿದ್ದರೆ ಅರ್ಥವು ಆಗುವುದಿಲ್ಲ. ಓದಿದ್ದು ಮರೆತು ಹೋಗುವಲ್ಲಿ ಸಂಶಯವು ಇಲ್ಲ.



♣️ ಓದುವ ಆಸಕ್ತಿ ಇಲ್ಲದಿರುವುದು:


ಶಿಕ್ಷಣದಲ್ಲಿ ಆಸಕ್ತಿ, ಹಂಬಲ ಇಲ್ಲದಿರುವುದು, ದೊಡ್ಡ ವ್ಯಕ್ತಿ ಆಗಬೇಕು, ಒಳ್ಳೆಯ ಹುದ್ದೆ ಪಡೆಯಬೇಕು, ಸಮಾಜದಲ್ಲಿ ಗೌರವ ಪಡೆಯಬೇಕು ಎಂಬ ಹಂಬಲ ಇಲ್ಲದಿದ್ದಾಗ ಓದಿನೆಡೆಗೆ ಲಕ್ಷ್ಯ ವಹಿಸುವುದೇ ಇಲ್ಲ. ಇಂಥವರು ಎಷ್ಟೇ ಓದಿದರೂ ಪ್ರಯೋಜನವಿಲ್ಲ.



♣️​ ಮೊಬೈಲ್‌ ಬಳಕೆ:


ಇಂದು ಸ್ಮಾರ್ಟ್‌ಫೋನ್‌ಗಳನ್ನು ಒಳ್ಳೆಯದಕ್ಕು ಬಳಸಬಹುದು, ಕೆಟ್ಟದಕ್ಕೂ ಬಳಸಬಹುದು. ಆದರೆ ಇಂದಿನ ಯುವ ಜನಾಂಗ ಒಳ್ಳೆಯದಕ್ಕಿಂತ ಕೆಟ್ಟದ್ದಕ್ಕಾಗಿ, ಮಾಹಿತಿಗಿಂತ ಮನರಂಜನೆಗಾಗಿ ಹೆಚ್ಚು ಬಳಸುತ್ತಿದೆ. ಹೆಚ್ಚು ಇದನ್ನು ಬಳಸುವವರ ಮನಸ್ಸು ವಿಕಾರವಾಗುವುದು ಹೌದು, ಹೆಚ್ಚು ವಿಚಲಿತಗೊಳ್ಳುವುದು ಹೌದು. ಇದರಿಂದ ಓದಿದ್ದು ಮರೆಯುವುದು ಹೌದು. ಮೊಬೈಲ್ ಬಳಸುವುದಾದರೆ Gk Master Academy  ಗ್ರೂಪ್‌ ಗೆ Join ಆಗಿ ನಿಮ್ಮ ಅಧ್ಯಯನಕ್ಕೆ ಅದು ತುಂಬಾ ಉಪಕಾರಿ, 



♣️ ಪಂಚೇಂದ್ರಿಯಗಳ ಮೇಲೆ ನಿಯಂತ್ರಣ ಇಲ್ಲದಿರುವುದು:


ಕಣ್ಣು, ಕಿವಿ, ಮೂಗು, ಬಾಯಿ ಹಾಗೂ ಚರ್ಮ ಇವುಗಳ ಮೇಲೆ ಹಿಡಿತ ಇರಬೇಕು. ಇಂದ್ರಿಯಗಳ ತಾಳಕ್ಕೆ ತಕ್ಕಂತೆ ಕುಣಿಯುವುದರಿಂದ ಕಲಿಕೆ ಯಶಸ್ವಿ ಆಗುವುದಿಲ್ಲ.


♣️ ಗಲಾಟೆ, ಗದ್ದಲಗಳ ನಡುವೆ ಓದುವುದು:


ಶಾಂತ ವಾತಾವರಣ ಯಶಸ್ವಿ ಓದಿಗೆ ಪೂರಕ ಹಾಗೂ ಸ್ಫೂರ್ತಿ. ಸುತ್ತ ಮುತ್ತ ಹೆಚ್ಚು ಶಬ್ಧ, ಗಲಾಟೆ, ಗದ್ದಲಗಳು ಇದ್ದಲ್ಲಿ ಓದಿಗೆ ಭಂಗ ಉಂಟುಮಾಡುತ್ತವೆ.



♣️ ಪುನರಾವರ್ತನೆ ಮಾಡದಿರುವುದು:


ನೆನಪುಗಳಲ್ಲಿ ಎರಡು ವಿಧ. ಆಗ ತಾನೆ ಓದಿದ ಮಾಹಿತಿ ಅಲ್ಪಾವಧಿ ನೆನಪಿಗೆ ಹೋಗುತ್ತದೆ. ಎರಡನೆಯದು ದೀರ್ಘಾವಧಿ ನೆನಪು. ಯಾವುದೇ ವಿಷಯ ಹೆಚ್ಚುಕಾಲ ನೆನಪಿನಲ್ಲಿ ಅಂದರೆ ದೀರ್ಘಕಾಲ ಉಳಿಯಬೇಕೆಂದರೆ ಆಗಾಗ ಪುನರ್ ಮನನ ಮಾಡಬೇಕು.



♣️ ಟಿಪ್ಪಣಿ ಬರೆಯದಿರುವುದು:


ಯಾವಾಗಲು ಶಾರ್ಟ್‌ ನೋಟ್ಸ್‌ಗಳನ್ನು ಓದಬಾರದು. ಪುಸ್ತಕಗಳನ್ನು ಓದಿ ಶಾರ್ಟ್‌ ನೋಟ್ಸ್‌, ಟಿಪ್ಪಣಿಗಳನ್ನು ಮಾಡಿಕೊಳ್ಳಬೇಕು. ಈ ಎರಡು ಓದುವ ಕ್ರಮದಿಂದ ಹೆಚ್ಚು ವಿಷಯ ಸಂಗ್ರಹವಾಗುತ್ತದೆ ಮತ್ತು ಇನ್ನೊಮ್ಮೆ ಓದುವಾಗ ಟಿಪ್ಪಣಿಗಳನ್ನು ಓದುವುದರಿಂದ ಸಮಯವು ಉಳಿಯುತ್ತದೆ.



♣️ ದುಶ್ಚಟಗಳು:


ಗುಟಕಾ, ಮದ್ಯಪಾನ, ಧೂಮ್ರಪಾನ ಮಾಡುವವರಿಗೆ ಅವುಗಳು ಸಿಗದಿದ್ದಾಗ ಉತ್ತೇಜನ ಕಳೆದುಕೊಳ್ಳುತ್ತಾರೆ. ಅವುಗಳನ್ನು ಪಡೆಯುವುದಕ್ಕೆ ವಿವಿಧ ರೀತಿಯ ಕಸರತ್ತು ಪ್ರಾರಂಭಿಸುತ್ತಾರೆ.


♣️ ಬೇರೆಯವರ ನೋಟ್ಸ್‌ ಓದುವುದು ಮತ್ತು ನಿರಂತರ ಓದುವುದು:


ಬೇರೆಯವರ ನೋಟ್ಸ್‌ನಲ್ಲಿ ನಮ್ಮ ಅಕ್ಷರಗಳು ಕಾಣುವುದಿಲ್ಲ. ಆದ್ದರಿಂದ ಅದು ನಮ್ಮದು ಎನಿಸುವುದು ಇಲ್ಲ.ಬೇರೆಯವರ ನೋಟ್ಸ್ ನಮಗೆ ಕೇವಲ Reference ಆಗಿರಲಿ ಆದರೆ ಅದೇ ಭಗವದ್ಗೀತೆ ಆಗದಿರಲಿ. ಹಾಗೆಯೇ ನಿರಂತರ ಓದುವುದರಿಂದ ಮೆದುಳಿಗೆ ಒತ್ತಡ ಹೆಚ್ಚಾಗಿ ಓದಿದ ವಿಷಯಗಳು ತಲೆಯೊಳಗೆ ಹೋಗುವುದಿಲ್ಲ.

ಆದೇಶಗಳು & ಸುತ್ತೋಲೆಗಳು

TELEGRAM CHANNEL LINKS JOIN WITH US & GET PDF

👉Diksha login.pdf

👉Transfer NOTIFICATION 

👉Jyoti_sanjivani_Hospitals Abhinandan Jarale.pdf

👉 income tax circular 2020-21 .pdf  telegram Link

👉 ದೀಪಾವಳಿ ಆಚರಣೆ ಆದೇಶ.pdf

👉Declaration of holiday reg.PDF

👉'PH Promote proposal

ಕನ್ನಡದ ಬಿರುದಾಂಕಿತರು

 


1. ದಾನ ಚಿಂತಾಮಣಿ - ಅತ್ತಿಮಬ್ಬೆ


2. ಕನ್ನಡ ಕುಲಪುರೋಹಿತ - ಆಲೂರು ವೆಂಕಟರಾಯ


3. ಕನ್ನಡದ ಶೇಕ್ಸ್ಪಿಯರ್ - ಕಂದಗಲ್ ಹನುಮಂತರಾಯ


4. ಕನ್ನಡದ ಕೋಗಿಲೆ - ಪಿ.ಕಾಳಿಂಗರಾವ್


5. ಕನ್ನಡದ ವರ್ಡ್ಸ್ವರ್ತ್ - ಕುವೆಂಪು


6. ಕಾದಂಬರಿ ಸಾರ್ವಭೌಮ - ಅ.ನ.ಕೃಷ್ನರಾಯ


7. ಕರ್ನಾಟಕ ಪ್ರಹಸನ ಪಿತಾಮಹ - ಟಿ.ಪಿ.ಕೈಲಾಸಂ


8. ಕರ್ನಾಟಕದ ಕೇಸರಿ - ಗಂಗಾಧರರಾವ್ ದೇಶಪಾಂಡೆ


9. ಸಂಗೀತ ಗಂಗಾದೇವಿ - ಗಂಗೂಬಾಯಿ ಹಾನಗಲ್


10. ನಾಟಕರತ್ನ - ಗುಬ್ಬಿ ವೀರಣ್ಣ


11. ಚುಟುಕು ಬ್ರಹ್ಮ - ದಿನಕರ ದೇಸಾಯಿ


12. ಅಭಿನವ ಪಂಪ - ನಾಗಚಂದ್ರ


13. ಕರ್ನಾಟಕ ಸಂಗೀತ ಪಿತಾಮಹ - ಪುರಂದರ ದಾಸ


14. ಕರ್ನಾಟಕದ ಮಾರ್ಟಿನ್ ಲೂಥರ್ - ಬಸವಣ್ಣ


15. ಅಭಿನವ ಕಾಳಿದಾಸ - ಬಸವಪ್ಪಶಾಸ್ತ್ರಿ


16. ಕನ್ನಡದ ಆಸ್ತಿ - ಮಾಸ್ತಿ ವೆಂಕಟೇಶ ಅಯ್ಯಂಗಾರ್


17. ಕನ್ನಡದ ದಾಸಯ್ಯ - ಶಾಂತಕವಿ


18. ಕಾದಂಬರಿ ಪಿತಾಮಹ - ಗಳಗನಾಥ


19. ತ್ರಿಪದಿ ಚಕ್ರವರ್ತಿ - ಸರ್ವಜ್ಞ


20. ಸಂತಕವಿ - ಪು.ತಿ.ನ.


21. ಷಟ್ಪದಿ ಬ್ರಹ್ಮ - ರಾಘವಾಂಕ


22. ಸಾವಿರ ಹಾಡುಗಳ ಸರದಾರ - ಬಾಳಪ್ಪ ಹುಕ್ಕೇರಿ


23. ಕನ್ನಡದ ನಾಡೋಜ - ಮುಳಿಯ ತಿಮ್ಮಪ್ಪಯ್ಯ


24. ಸಣ್ಣ ಕತೆಗಳ ಜನಕ - ಮಾಸ್ತಿ ವೆಂಕಟೇಶ ಅಯ್ಯಂಗಾರ್


25. ಕರ್ನಾಟಕ ಶಾಸನಗಳ ಪಿತಾಮಹ - ಬಿ.ಎಲ್.ರೈಸ್


26. ಹರಿದಾಸ ಪಿತಾಮಹ - ಶ್ರೀಪಾದರಾಯ


27. ಅಭಿನವ ಸರ್ವಜ್ಞ - ರೆ. ಉತ್ತಂಗಿ ಚೆನ್ನಪ್ಪ


28. ವಚನಶಾಸ್ತ್ರ ಪಿತಾಮಹ - ಫ.ಗು.ಹಳಕಟ್ಟಿ


29. ಕವಿಚಕ್ರವರ್ತಿ - ರನ್ನ


30. ಆದಿಕವಿ - ಪಂಪ


31. ಉಭಯ ಚಕ್ರವರ್ತಿ - ಪೊನ್ನ


32. ರಗಳೆಯ ಕವಿ - ಹರಿಹರ


33. ಕನ್ನಡದ ಕಣ್ವ - ಬಿ.ಎಂ.ಶ್ರೀ


34. ಕನ್ನಡದ ಸೇನಾನಿ - ಎ.ಆರ್.ಕೃಷ್ಣಾಶಾಸ್ತ್ರಿ


35. ಕರ್ನಾಟಕದ ಉಕ್ಕಿನ ಮನುಷ್ಯ - ಹಳ್ಳಿಕೇರಿ ಗುದ್ಲೆಪ್ಪ


36. ಯಲಹಂಕ ನಾಡಪ್ರಭು - ಕೆಂಪೇಗೌಡ


37. ವರಕವಿ - ಬೇಂದ್ರೆ


38. ಕುಂದರ ನಾಡಿನ ಕಂದ - ಬಸವರಾಜ ಕಟ್ಟೀಮನಿ


39. ಪ್ರೇಮಕವಿ - ಕೆ.ಎಸ್.ನರಸಿಂಹಸ್ವಾಮಿ


40. ಚಲಿಸುವ ವಿಶ್ವಕೋಶ - ಕೆ.ಶಿವರಾಮಕಾರಂತ


41. ಚಲಿಸುವ ನಿಘಂಟು - ಡಿ.ಎಲ್.ನರಸಿಂಹಾಚಾರ್


42. ದಲಿತಕವಿ - ಸಿದ್ದಲಿಂಗಯ್ಯ


43. ಅಭಿನವ ಭೋಜರಾಜ - ಮುಮ್ಮಡಿ ಕೃಷ್ಣರಾಜ ಒಡೆಯರು


44. ಪ್ರಾಕ್ತನ ವಿಮರ್ಶಕ ವಿಚಕ್ಷಣ - ಆರ್.ನರಸಿಂಹಾಚಾರ್


45. ಕನ್ನಡದ ಕಬೀರ - ಶಿಶುನಾಳ ಷರೀಪ


46. ಕನ್ನಡದ ಭಾರ್ಗವ - ಕೆ.ಶಿವರಾಮಕಾರಂತ


47. ಕರ್ನಾಟಕದ ಗಾಂಧಿ - ಹರ್ಡೇಕರ್ ಮಂಜಪ್ಪ

ಇಂಡೇನ್ ಎಲ್ಪಿಜಿ ಗ್ರಾಹಕರಿಗೆ ದೇಶಾದ್ಯಂತ ಸುಗಮ ಬುಕ್ಕಿಂಗ್ ಸೌಲಭ್ಯ: ಒಂದೇ ದೂರವಾಣಿ ಸಂಖ್ಯೆ

 


ದೇಶದಲ್ಲಿ ನಡೆಯುತ್ತಿರುವ ಹಬ್ಬ ಪರ್ವದಲ್ಲಿ, ಇಂಡಿಯನ್ ಆಯಿಲ್ ಗ್ರಾಹಕರ ಅನುಕೂಲಕ್ಕಾಗಿ ಮತ್ತೊಂದು ಅನುಕೂಲ ಮಾಡಿಕೊಡಲಾಗಿದೆ. ಇದು ದೇಶಾದ್ಯಂತ ಇಂಡೇನ್ ಎಲ್ಪಿಜಿ ಮರುಪೂರಣದ ಸಿಲಿಂಡರ್ ಬುಕಿಂಗ್ ಗಾಗಿ ಒಂದೇ ಸಂಖ್ಯೆಯ ಸೇವೆಯನ್ನು ಪ್ರಾರಂಭಿಸಿದೆ. ಸಿಲಿಂಡರ್ ಬುಕಿಂಗ್ ಗೆ 7718955555 ಆಗಿದ್ದು,ಗ್ರಾಹಕರಿಗೆ ಈ ಸೇವೆ 24x7 ಲಭ್ಯವಿರುತ್ತದೆ.


ಅಖಿಲ ಭಾರತ ಮಟ್ಟದಲ್ಲಿ ಎಲ್.ಪಿ.ಜಿ. ಬುಕ್ಕಿಂಗ್ ನ್ನು ಒಂದೇ ಸಂಖ್ಯೆಯಲ್ಲಿ -ಎಸ್.ಎಂ.ಎಸ್. ಮತ್ತು ಐವಿಆರ್.ಎಸ್.- ಮೂಲಕ ಮಾಡಬಹುದಾಗಿದ್ದು, ಇದು ಇಂಡೇನ್ ಎಲ್.ಪಿ.ಜಿ. ಮರುಪೂರಣ ಸಿಲಿಂಡರ್ ಬುಕ್ ಮಾಡುವ ಗ್ರಾಹಕರಿಗೆ ಅನುಕೂಲತೆ ಹೆಚ್ಚಿಸುವ ಮಹತ್ವದ ಕ್ರಮವಾಗಿದೆ. ಇದರಿಂದಾಗಿ ಗ್ರಾಹಕರು ಒಂದು ದೂರಸಂಪರ್ಕ ವೃತ್ತದಿಂದ ಮತ್ತೊಂದಕ್ಕೆ, ಅಥವಾ ಯಾವುದೇ ರಾಜ್ಯಕ್ಕೆ ಹೋದರೂ, ಅವರ ಇಂಡೇನ್ ಮರುಪೂರಣ ಸಿಲಿಂಡರ್ ಬುಕಿಂಗ್ ಸಂಖ್ಯೆ ಒಂದೇ ಆಗಿರುತ್ತದೆ.


ಪ್ರಸ್ತುತ ವ್ಯವಸ್ಥೆಯಲ್ಲಿ ಇಂಡೇನ್ ಎಲ್.ಪಿ.ಜಿ. ಸಿಲಿಂಡರ್ ಬುಕ್ಕಿಂಗ್ ನ ದೂರವಾಣಿ ಸಂಖ್ಯೆ ದೂರಸಂಪರ್ಕ ವೃತ್ತ ನಿರ್ದಿಷ್ಟವಾಗಿದ್ದು, ಇದು 31.10.2020ರ ಮಧ್ಯರಾತ್ರಿಯಿಂದ ನಿಷ್ಕ್ರಿಯವಾಗಲಿದೆ ಮತ್ತು ಎಲ್.ಪಿ.ಜಿ. ಸಿಲಿಂಡರ್ ಬುಕ್ಕಿಂಗ್ ನ ಸಮಾನ ಸಂಖ್ಯೆ ಅಂದರೆ 7718955555, ಜಾರಿಗೆ ಬರುತ್ತದೆ.

ದಯವಿಟ್ಟು ಗಮನಿಸಿ ಇಂಡೇನ್ ಎಲ್.ಪಿಜಿ. ಸಿಲಿಂಡರ್ ಬುಕ್ಕಿಂಗ್ ಅನ್ನು ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಾತ್ರವೇ ಮಾಡಬಹುದು. ಎಲ್.ಪಿ.ಜಿ. ಸಿಲಿಂಡರ್ ಬುಕ್ಕಿಂಗ್ ನ ಪರಿಷ್ಕೃತ ಪ್ರಕ್ರಿಯೆ ಮತ್ತು ಮೊಬೈಲ್ ಸಂಖ್ಯೆ ನೋಂದಣಿ ಹೀಗಿದೆ.

ಗ್ರಾಹಕರ ದೂರವಾಣಿ ಸಂಖ್ಯೆ ಈಗಾಗಲೇ ಇಂಡೇನ್ ದಾಖಲೆಗಳಲ್ಲಿ ನೋಂದಣಿಯಾಗಿದ್ದರೆ, ಐವಿಆರ್.ಎಸ್. 16 ಅಂಕಿಗಳ ಗ್ರಾಹಕರ ಐಡಿಯನ್ನು ಕೇಳುತ್ತದೆ. ಈ 16 ಅಂಕಿಗಳ ಗ್ರಾಹಕರ ಐಡಿ ಇಂಡೇನ್ ಎಲ್.ಪಿಜಿ. ಗ್ರಾಹಕರ ಇನ್ ವಾಯ್ಸ್/ನಗದು ಮೆಮೋ/ಚಂದಾ ವೋಚರ್ ನಲ್ಲಿ ನಮೂದಾಗಿರುತ್ತದೆ. ಗ್ರಾಹಕರ ದೃಢೀಕರಣದ ತರುವಾಯ ಮರುಪೂರಣ ಸಿಲಿಂಡರ್ ಬುಕ್ಕಿಂಗ್ ಅಂಗೀಕಾರವಾಗುತ್ತದೆ.

ಒಂದೊಮ್ಮೆ ಗ್ರಾಹಕರ ಮೊಬೈಲ್ ಸಂಖ್ಯೆ ಇಂಡೇನ್ ದಾಖಲೆಗಳಲ್ಲಿ ಲಭ್ಯವಿಲ್ಲದಿದ್ದಲ್ಲಿ, ಆಗ ಒಂದು ಬಾರಿಯ ಮೊಬೈಲ್ ನಂಬರ್ ನೋಂದಣಿಯನ್ನು ಗ್ರಾಹಕರು ಸಂಖ್ಯೆ 7 ರಿಂದ ಆರಂಭವಾಗುವ ಅವರ 16 ಅಂಕಿಗಳ ಗ್ರಾಹಕರ ಐಡಿಯನ್ನು ಟೈಪ್ ಮಾಡುವ ಮೂಲಕ ಮಾಡಬಹುದಾಗಿದೆ. ಅದೇ ಐವಿಆರ್. ಎಸ್ಕರೆಯಲ್ಲಿ ದೃಢೀಕರಣದ ನಂತರ ಇದನ್ನು ಅನುಸರಿಸಬೇಕು. ದೃಢೀಕರಣದನಂತರ, ಗ್ರಾಹಕರ ಮೊಬೈಲ್ ಸಂಖ್ಯೆ ನೋಂದಣಿಯಾಗುತ್ತದೆ ಮತ್ತು ಎಲ್ಪಿಜಿ ಮರು ಪೂರಣ ಬುಕಿಂಗ್ ಅನ್ನು ಸ್ವೀಕರಿಸಲಾಗುತ್ತದೆ. ಗ್ರಾಹಕರಈ 16-ಅಂಕಿಯ ಗ್ರಾಹಕ ಐಡಿಯನ್ನು ಇಂಡೇನ್ ಎಲ್ಪಿಜಿಇ ನ್ವಾಯ್ಸ್ / ನಗದುಮೆಮೋ / ಚಂದಾದಾರಿಕೆಚೀಟಿಯಲ್ಲಿಉಲ್ಲೇಖಿಸಲಾಗಿರುತ್ತದೆ.

ನಿಮ್ಮ ನೆಚ್ಚಿನ ಇಂಡೇನ್ ಎಲ್.ಪಿ.ಜಿ.ಯ ಹೆಚ್ಚಿನ ನವೀಕರಣಗಳಿಗಾಗಿ ನಮ್ಮ ಅಂತರ್ಜಾಲ ತಾಣhttps://cx.indianoil.in ಲಾಗ್ ಇನ್ ಮಾಡಿ ಅಥವಾ ಇಂಡಿಯನ್ ಆಯಿಲ್ ಒನ್ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ ಎಂದು ಸೂಚಿಸಲಾಗಿದೆ.

ಕನಸಿನ ಯೋಜನೆ: ದೇಶದ ಮೊಟ್ಟ ಮೊದಲ ಸೀಪ್ಲೇನ್‍ಗೆ ಪ್ರಧಾನಿ ಮೋದಿ ಚಾಲನೆ

 ದೇಶದ ಮೊಟ್ಟ ಮೊದಲ ಸೀಪ್ಲೇನ್‍ ಅಥವಾ ಸಮುದ್ರದ ವಿಮಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು. ಎರಡು ದಿನಗಳ ಗುಜರಾತ್‌ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 145ನೇ ಜನ್ಮದಿನಾಚರಣೆ ಅಂಗವಾಗಿ ದೇಶದ ಈ ವಿನೂತನ ಯೋಜನೆ ಉದ್ಘಾಟಿಸಿ ಚಾಲನೆ ಕೊಟ್ಟರು. ಕೆವಾಡಿಯಾದ ನರ್ಮದಾ ಸರೋವರದ ತಟದಲ್ಲಿ ಪ್ರಧಾನಿ ಮೋದಿ ತಮ್ಮ ಕನಸಿನ ಯೋಜನೆಯನ್ನು ದೇಶದ ಜನರಿಗೆ ಅರ್ಪಿಸಿದರು

ಕೇಂದ್ರ ಸರಕಾರದ ಉಡಾನ್ ಯೋಜನೆಯಡಿ ಇದನ್ನು ಆರಂಭಿಸಲಾಗಿದ್ದು, ಗುಜರಾತ್ ಸರ್ಕಾರದೊಂದಿಗೆ ಕೇಂದ್ರ ನಾಗರಿಕ ವಿಮಾನಯಾನ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರದೊಂದಿಗೆ ತ್ರಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಲ್ಲದೇ ಪ್ರಧಾನಿ ಮೋದಿಯವರ ಮೇಕ್‌ ಇನ್‌ ಇಂಡಿಯಾದ ಕನಸಿನ ಯೋಜನೆ ಕೂಡ ಹೌದು. ಇನ್ನು ಸಬರಮತಿ ಬಳಿಕ ಗುವಾಹಟಿ, ಅಂಡಮಾನ್ ನಿಕೋಬಾರ್, ಯಮುನಾ ಸೇರಿದಂತೆ ಉತ್ತರಾಖಂಡದ ಟಪ್ಪರ್ ಅಣೆಕಟ್ಟಿನ ವಿವಿಧ ಮಾರ್ಗಗಳಲ್ಲಿ ನಿಯಮಿತ ಸೇವೆಗಳನ್ನು ನೀಡಲು ಯೋಜನೆ ರೂಪಿಸಲಾಗಿದೆ. ದ್ವೀಪಗಳಲ್ಲಿ ಇದರ ಅಗತ್ಯತೆ ಬಹಳಷ್ಟಿದೆ. ದೇಶದಲ್ಲಿ ಸ್ಪೈಸ್ ಜೆಟ್ ಸಂಸ್ಥೆ ಗುಜರಾತ್‌ನ ಸೀಪ್ಲೇನ್‌ ನ ಸೇವೆಯನ್ನು ನೀಡಲಿದೆ.

ನಿಮಗಿದು ಗೋತ್ತೆ ?